Languages

ಪಾಠ 10

ದೇವರಿಂದ ರಕ್ಷಿಸಲ್ಪಟ್ಟ ಎಲ್ಲರೂ ಚರ್ಚ್. ನಾವೇ ಚರ್ಚ್.

"ನಮಗೆ ಚರ್ಚ್ ಅಗತ್ಯವಿಲ್ಲ" ಎಂದು ನಾವು ಹೇಳಿದರೆ, "ನಮಗೆ ಬೇರೆ ಯಾವುದೇ ಕ್ರೈಸ್ತರ ಅಗತ್ಯವಿಲ್ಲ ಮತ್ತು ನಾವೂ ಕ್ರೈಸ್ತರಾಗಿರಬೇಕಾಗಿಲ್ಲ" ಎಂದು ಹೇಳಿದಂತೆ.

ನಾವು ದೇವರ ಕುಟುಂಬ. ಈ ಕುಟುಂಬದ ಭಾಗವಾಗಿರುವುದು ನಮಗೆ ಕ್ರೈಸ್ತ ಜೀವನವನ್ನು ಜೀವಿಸಲು ಸಹಾಯ ಮಾಡುತ್ತದೆ. ನಮಗೆ ಒಬ್ಬರಿಗೊಬ್ಬರು ಬೇಕು ಏಕೆಂದರೆ ಒಬ್ಬರಿಗೊಬ್ಬರಿಲ್ಲದೆ ಕುಟುಂಬವಿಲ್ಲ. ಪ್ರೀತಿಯಿಂದ ಒಬ್ಬರನ್ನೊಬ್ಬರು ಬೆಂಬಲಿಸದೆ, ನಾವು ಕುಸಿಯುತ್ತೇವೆ. ದೇವರು ನಮ್ಮನ್ನು ಆತನೊಂದಿಗೆ ಒಟ್ಟಿಗೆ ವಾಸಿಸುವಂತೆ ಮಾಡಿದನು. ನಾವು ಇತರರೊಂದಿಗೆ ಸಮುದಾಯದಲ್ಲಿ ಬದುಕದಿದ್ದರೆ, ನಾವು ಬದುಕುವುದೇ ಇಲ್ಲ.

ನಾವು ಒಬ್ಬಂಟಿಯಾಗಿದ್ದರೆ, ಬೆಂಕಿಯಿಂದ ತೆಗೆದ ಕಲ್ಲಿದ್ದಲಿನಂತೆ ನಮ್ಮ ಬೆಂಕಿಯು ಆರುತ್ತದೆ. ಆದರೆ ನಾವು ಹೃದಯಗಳು ಉತ್ಸಾಹದಿಂದ ಉರಿಯುತ್ತಿರುವ ಇತರ ಕ್ರೈಸ್ತರ ಸುತ್ತಲೂ ಇದ್ದರೆ ನಮ್ಮ ಜ್ವಾಲೆಯೂ ಪ್ರಕಾಶಮಾನವಾಗಿ ಬೆಳೆಯುತ್ತದೆ.

ಒಟ್ಟಿಗೆ ಭೇಟಿಯಾಗುವುದನ್ನು ನಿರ್ಲಕ್ಷಿಸಬೇಡಿ ಎಂದು ಸಹ ಬೈಬಲ್ ನಮಗೆ ಹೇಳುತ್ತದೆ. ಬೈಬಲ್ ಅನ್ನು ಓದಲು, ಪ್ರಾರ್ಥಿಸಲು ಮತ್ತುಕ್ರೈಸ್ತ ಜೀವನವನ್ನು ನಡೆಸುವಂತೆ ಪರಸ್ಪರ ಪ್ರೋತ್ಸಾಹಿಸಲು ಇತರ ಆಸ್ತಿಕರೊಂದಿಗೆ ನಿಯಮಿತವಾಗಿ ನೀವು ಭೇಟಿಯಾಗದಿದ್ದರೆ, ಕ್ರಮೇಣ ದೇವರಿಂದ ದೂರವಾಗುತ್ತೀರಿ. ಈ ರೀತಿಯಲ್ಲಿ ಇತರ ಕ್ರೈಸ್ತರೊಂದಿಗೆ ಇರುವುದು ನಮಗೆ ಬೆಳೆಯಲು ಸಹಾಯ ಮಾಡುತ್ತದೆ; ಇದು ನಮ್ಮನ್ನು ಉತ್ತೇಜಿಸುತ್ತದೆ ಮತ್ತು ಉತ್ಸಾಹ ನೀಡುತ್ತದೆ. ಇದು ನಮ್ಮ ಸ್ವಾಭಾವಿಕ ಸ್ವಾರ್ಥ ಸ್ವಭಾವದಿಂದ ನಮ್ಮನ್ನು ಹೊರಗೆಳೆಯುತ್ತದೆ.

ನಾವು ಪರಸ್ಪರ ಭೇಟಿಯಾಗಬೇಕಾಗಿರುವ ಕಾರಣಕ್ಕೆ ಮಾತ್ರ ಭೇಟಿಯಾಗುವುದಿಲ್ಲ. ನಾವು ಒಬ್ಬರನ್ನೊಬ್ಬರು ಭೇಟಿಯಾಗುತ್ತೇವೆ ಏಕೆಂದರೆ ಒಟ್ಟಿಗೆ ಇರುವುದು ಒಂದು ಉಡುಗೊರೆ. ನಾವು ನಮ್ಮ ಕ್ರೈಸ್ತ ಸ್ನೇಹಿತರ ಮನೆಗಳಲ್ಲಿ ಭೇಟಿಯಾಗಬೇಕು ಎಂದರ್ಥವಲ್ಲ, ಆದರೆ ಅದುವೂ ಸಹ ಸುಂದರ ಮತ್ತು ಮುಖ್ಯ. ನಮಗೆ ಅದಕ್ಕಿಂತ ಹೆಚ್ಚಿನದು ಬೇಕು.

ನಮಗೆ ನಿಖರವಾಗಿ ಬೇಕಿರುವುದು ಏನು?

ನಮಗೆ ಪ್ರೀತಿಯ ಸ್ನೇಹಿತರು, ವೈಯಕ್ತಿಕ ಹೊಣೆಗಾರಿಕೆ, ಘನ ಬೋಧನೆ, ಬೈಬಲ್‌ನ ಅಧಿಕಾರ ಮತ್ತು ಇತರರನ್ನು ಕ್ರಿಸ್ತನ ಹತ್ತಿರಕ್ಕೆ ಕರೆದೊಯ್ಯುವ ಅವಕಾಶಗಳು ಬೇಕು.

ತಮ್ಮ ಜೀವನಶೈಲಿಯಲ್ಲಿ ನಿಷ್ಠೆಯನ್ನು ಸಾಬೀತುಪಡಿಸಿದ ನಂತರ, ದೇವರು ಮತ್ತು ಆತನ ವಾಕ್ಯವನ್ನು ಅರಿತುಕೊಂಡು ನಿಜವಾಗಿಯೂ ಬೆಳೆದ ನಂತರ ತಮ್ಮ ಸ್ಥಾನಗಳನ್ನು ಗಳಿಸಿರುವ ಪಾದ್ರಿಗಳು ಮತ್ತು ಹಿರಿಯರ ಅಧಿಕಾರದ ಅಡಿಯಲ್ಲಿ ನಾವು ಜೀವಿಸಬೇಕು. ಬೋಧಿಸುವುದನ್ನು ಪಾಲಿಸುವ ಅರ್ಹ ಶಿಕ್ಷಕರ ಅಧಿಕಾರದಡಿಯಲ್ಲಿ ನಾವು ಇಲ್ಲದಿದ್ದರೆ, ದೇವರ ಕುರಿತಾದ ನಮ್ಮ ನಂಬಿಕೆಗಳು ದೇವರು ಎಂದಿಗೂ ಉದ್ದೇಶಿಸದ ರೀತಿಯಲ್ಲಿ ಬದಲಾಗಬಹುದು.

ಹೆಚ್ಚಿನ ಜನರು ಒಂದು ನಿರ್ದಿಷ್ಟ ರೀತಿಯಲ್ಲಿ ಬದುಕಲು ಇತರರು ತಮಗೆ ತಿಳಿಸುವುದನ್ನು ಇಷ್ಟಪಡುವುದಿಲ್ಲ. ನಮ್ಮ ಜೀವನವನ್ನು ಪರೀಕ್ಷಿಸಿ ನಾವು ತಪ್ಪು ಮಾಡುತ್ತಿದ್ದೇವೆ, ಬದಲಾಗಬೇಕು ಎಂದು ಇತರರು ಹೇಳುವುದನ್ನು ಕೇಳುವುದು ಅಹಿತಕರ. ಆದರೆ ನಮ್ಮನ್ನು ಯಾರೂ ಪ್ರಶ್ನಿಸದಿದ್ದರೆ, ನಮ್ಮ ತಪ್ಪುಗಳು ಬೆಳೆದು ಬೆಳೆದು ಸ್ಫೋಟಗೊಂಡು ಜನರಿಗೆ ಹಾನಿ ಮಾಡುತ್ತವೆ.

ಚರ್ಚ್‌ನ ಭಾಗವಾಗುವುದರ ಮೂಲಕ, ಬೈಬಲ್‌ನಲ್ಲಿ ಪ್ರಸ್ತುತಪಡಿಸಿದಂತೆ ಕಾಣುವ ಅರ್ಹ ಶಿಕ್ಷಕರ ಅಡಿಯಲ್ಲಿ,[2] ನಾವು ಜವಾಬ್ದಾರರಾಗಿರುತ್ತೇವೆ.

ಅರ್ಹ ಶಿಕ್ಷಕರ ಅಧಿಕಾರವು ಇತರರ ಮೇಲೆ ದಬ್ಬಾಳಿಕೆ ಮಾಡಲು ಬಯಸುವ ಜನರಿಂದ ಸಹ ನಮ್ಮನ್ನು ರಕ್ಷಿಸುತ್ತದೆ. ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡರೆ ಸಹಾಯಕ್ಕಾಗಿ ನಾವು ಕೇಳಬಹುದಾದ ಜನರನ್ನು ಇದು ನಮಗೆ ನೀಡುತ್ತದೆ. ಸಾಮಾನ್ಯವಾಗಿ ನಮಗೆ ಬೆಂಬಲ ನಿಲ್ಲಲು ಯಾರಾದರೂ ನಮಗೆ ಬೇಕಾಗಿಯೇ ಇರುತ್ತಾರೆ.

ಕೊನೆಯದಾಗಿ, ಇದು ನಮಗೆ ಸಮುದಾಯದ ಅಡಿಪಾಯವನ್ನು ನೀಡುತ್ತದೆ, ಇಲ್ಲಿ ಇತರರನ್ನು ಕ್ರಿಸ್ತನ ಹತ್ತಿರ ತರಲು ಸಹಾಯ ಮಾಡುವ ಮಾರ್ಗವನ್ನು ನಾವು ಕಂಡುಕೊಳ್ಳಬಹುದು. ದೇವರು ನಮ್ಮ ಜೀವನವನ್ನು ಬದಲಾಯಿಸಿದ ನಂತರ, ಆತನ ಬಗ್ಗೆ ಇತರರಿಗೆ ಕಲಿಸಲು ಹೇಳುತ್ತಾನೆ ಎಂಬುದನ್ನು ನಾವು ಮರೆಯಬಾರದು.

ರಚನೆಯಿಲ್ಲದ ವ್ಯವಸ್ಥೆಯಲ್ಲಿ ಶುಭಸಂದೇಶವನ್ನು ಸಾರುವುದು ಸುಲಭ, ಆದರೆ ಜನರನ್ನು ಶಿಷ್ಯರನ್ನಾಗಿ ಮಾಡುವುದು ದೀರ್ಘಾವಧಿಯ ಶ್ರಮ. ಜನರನ್ನು ತಪ್ಪಾಗಿ ನಡೆಸದಂತೆ ಅಥವಾ ನಾವು ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಜನರನ್ನು ನೋಯಿಸದಂತೆ ನಮ್ಮನ್ನು ತಡೆಯುವ ಪಾದ್ರಿಗಳು ಮತ್ತು ಹಿರಿಯರ ಅಧಿಕಾರಕ್ಕೆ ಶರಣಾಗಿ ನಾವು ಯಾವಾಗಲೂ ಜನರನ್ನು ಶಿಷ್ಯರನ್ನಾಗಿ ಮಾಡಬೇಕು..

ನಂಬಿಕೆಯ ಸಮುದಾಯವನ್ನು ಕಂಡುಕೊಳ್ಳುವುದು ಹೇಗೆ? ಮೊದಲಿಗೆ, ನಿಮಗೆ ಸಹಾಯ ಮಾಡಲು ದೇವರನ್ನು ಕೇಳಿಕೊಳ್ಳಿ. ನಂತರ ಸುತ್ತಲೂ ನೋಡಿ. ಶುದ್ಧ, ಪ್ರೀತಿಯ ಜೀವನವನ್ನು ನಡೆಸುತ್ತಿರುವ ಜನರನ್ನು ಗಮನಿಸಿ ಮತ್ತು ಅವರು ಎಲ್ಲಿ ಚರ್ಚ್‌ಗೆ ಹೋಗುತ್ತಾರೆ ಎಂಬುದನ್ನು ಕಂಡುಕೊಳ್ಳಿ. ಚರ್ಚುಗಳಿಗೆ ಭೇಟಿ ನೀಡಲು ಪ್ರಾರಂಭಿಸಿ. ಸ್ವೀಕರಿಸುವ, ಪ್ರಾಮಾಣಿಕ ಮತ್ತು ಪ್ರೀತಿಯಿಂದ ತುಂಬಿರುವ ಜನರಿರುವ ಚರ್ಚ್‌ಗಾಗಿ ಹುಡುಕಿ. ಬೈಬಲ್ ಸ್ಪಷ್ಟವಾಗಿ ಬೋಧಿಸುವುದನ್ನು ನಂಬುವ ಪಾದ್ರಿಗಳು ಮತ್ತು ಹಿರಿಯರನ್ನು ಹುಡುಕಿ ಮತ್ತು ಬೈಬಲ್ ಏನು ಹೇಳುತ್ತದೆ ಎಂಬುದರ ಬಗ್ಗೆ ಅನುಮಾನಿಸಬೇಡಿ. ಅವರು ಏನನ್ನು ನಂಬುತತೆವೆ ಎಂದು ಹೇಳುತ್ತಾರೋ ಅದನ್ನು ಪಾಲಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ಅವರು ಅದನ್ನು ನಿಜವಾಗಿಯೂ ನಂಬುವುದಿಲ್ಲ ಎಂದರ್ಥ.

ನೀವು ಯಾವುದೇ ಚರ್ಚ್‌ಗೆ ಹೋಗಿ, ಅಲ್ಲಿನ ಜನರು ಪರಸ್ಪರ ಪ್ರೀತಿಸುತ್ತಾರೆಯೇ, ಸೇವೆ ಮಾಡುತ್ತಾರೆಯೇ? ಅವರು ಬೈಬಲ್ ಅನ್ನು ಪ್ರೀತಿಸುತ್ತಾರೆಯೇ ಮತ್ತು ನೀವು ಅನುಭವಿಸಬಹುದಾದ ಮತ್ತು ನೋಡಬಹುದಾದ ಪ್ರಾಯೋಗಿಕ, ನೈಜ ರೀತಿಯಲ್ಲಿ ತಮ್ಮ ನಂಬಿಕೆಯನ್ನು ಪಾಲಿಸಲು ಪರಸ್ಪರ ಸಹಾಯ ಮಾಡುತ್ತಾರೆಯೇ? ಯಾರೂ ಪರಿಪೂರ್ಣರಲ್ಲ! ಆದರೆ ತಮ್ಮ ಜೀವನವು ಸ್ಥಿರವಾಗಿದೆಯೇ ಎಂದು ಕಾಳಜಿ ವಹಿಸದ ಜನರು ಮತ್ತು ಅವರ ತಪ್ಪುಗಳಿಗೆ ವಿಷಾದಿಸುವ ಜನರ ನಡುವಿನ ವ್ಯತ್ಯಾಸವನ್ನು ನೀವು ಹೇಳಬಹುದು.

ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ: ಅಲ್ಲಿ ದೇವರನ್ನು ಪೂಜಿಸಲಾಗುತ್ತದೆಯೇ, ಗೌರವಿಸಲಾಗುತ್ತದೆಯೇ?

ಪರಿಪೂರ್ಣ ಜನರು ಹೇಗೆ ಇರಲು ಸಾಧ್ಯವಿಲ್ಲವೋ ಹಾಗೆಯೇ ಪರಿಪೂರ್ಣ ಚರ್ಚ್ ಸಮುದಾಯವಿರಲು ಸಾಧ್ಯವಿಲ್ಲ. ಯೋಗ್ಯವಾದ ಚರ್ಚ್ ಒಂದನ್ನು ಹುಡುಕಿ, ನಿರಂತರವಾಗಿ ಹೋಗಿ ಮತ್ತು ದೂರಬೇಡಿ. ನೀವು ನೋಡಲು ಬಯಸುವ ಬದಲಾವಣೆಯಾಗಿರಿ. ಕ್ರಿಸ್ತನಲ್ಲಿಗೆ ನಿಮ್ಮ ಕುಟುಂಬವನ್ನು ಪ್ರೋತ್ಸಾಹಿಸಲು ಅವಕಾಶಗಳಿಗಾಗಿ ಹುಡುಕಿ. ಜನರನ್ನು ಪ್ರಾಮಾಣಿಕವಾಗಿ ಪ್ರೀತಿಸಿ! ನಿಮ್ಮ ಪ್ರೀತಿಯಿಂದ ಶುದ್ಧ ಹೃದಯದಿಂದ ಸೇವೆ ಮಾಡಿ. ಇತರ ಜನರಿಂದ "ಒಳ್ಳೆಯವನು" ಎಂದು ಹೆಸರು ಪಡೆಯುವ ಸಲುವಾಗಿ ಅಲ್ಲ.

ನಾವು ಮನುಷ್ಯರು ಮತ್ತು ನಮಗೆ ಒಬ್ಬರಿಗೊಬ್ಬರು ಬೇಕು ಎಂಬುದನ್ನು ಅರಿಯಿರಿ. ನಿಮಗೆ ಗೊತ್ತಿಲ್ಲದಿರಬಹುದು, ಆದರೆ ನಿಮಗೆ ಕಿರಿಕಿರಿ ಉಂಟುಮಾಡುವ ವ್ಯಕ್ತಿ ನಿಮಗೆ ಬೆಳೆಯುವಲ್ಲಿ ಸಹಾಯ ಮಾಡಲು ದೇವರು ನಿಮ್ಮ ಜೀವನದಲ್ಲಿ ಇಟ್ಟಿರುವ ವ್ಯಕ್ತಿಯಾಗಿರಬಹುದು. ಮತ್ತು ಕ್ರಿಸ್ತನಲ್ಲಿಗೆ ಬೆಳೆಯಲು ಅವರಿಗೆ ಮೆಲ್ಲನೆ ಸಹಾಯ ಮಾಡಲು ನಿಮ್ಮನ್ನು ಅವರ ಜೀವನದಲ್ಲಿ ಸೇರಿಸಿರಬಹುದು. ಶಾಂತಿಯುತವಾಗಿ ಜೀವಿಸಿ ಮತ್ತು ಒಟ್ಟಿಗೆ ದೇವರನ್ನು ಗೌರವಿಸಿ. ಚರ್ಚ್ ಎಂದರೆ ಅದೇ.

ಇನ್ನಷ್ಟು ತಿಳಿಯಿರಿ

ಒಂದು ಚರ್ಚ್ ಅನ್ನು ಹುಡುಕಿ ಮತ್ತು ಮುಂಬರುವ ಭಾನುವಾರದಂದು ಹಾಜರಾಗಿ. ಆ ಅನುಭವದ ಬಗ್ಗೆ ನಿಮ್ಮ ಆಲೋಚನೆಗಳನ್ನು ಮತ್ತು ಅದು ನಿಮ್ಮ ಮೇಲೆ ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಹೇಗೆ ಪ್ರಭಾವ ಬೀರಿತು ಎಂಬುದರ ಬಗ್ಗೆ ಬರೆಯಿರಿ.

ಹಿಂದಿನದು ಪಟ್ಟಿ ಪಟ್ಟಿ ಮುಂದಿನದು